‘ಲವ್ ಅಫ಼ೇರ್ ಚಿತ್ರದ ಚಿತ್ರೀಕರಣ ಪೂರ್ಣ
Posted date: 14 Wed, Sep 2016 – 12:10:07 PM

ಸಾರಥಿಸ್ ಸಿನಿಮಾ ಲಾಂಛನದಲ್ಲಿ ಎಂ.ಮುನಿಕೃಷ್ಣಪ್ಪ ಅವರು ನಿರ್ಮಿಸುತ್ತಿರುವ ‘ಲವ್ ಅಫ಼ೇರ್’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಹಾಸನ, ಬೇಲೂರು, ಚಿಕ್ಕಮಗಳೂರು, ಶೃಂಗೇರಿ ಮುಂತಾದ ಕಡೆ ಚಿತ್ರಕ್ಕೆ ನಲವತ್ತು ದಿನಗಳ ಚಿತ್ರೀಕರಣ ನಡೆದಿದೆ.
    ಸಾರಥಿ ಅವರು ಛಾಯಗ್ರಹಣದೊಂದಿಗೆ ನಿರ್ದೇಶನವನ್ನು ಮಾಡಿರುವ ಈ ಚಿತ್ರಕ್ಕೆ ಪ್ರಸ್ತುತ ಸಂಕಲನ ಕಾರ್ಯ ನಡೆಯುತ್ತಿದೆ. ಸುಜಯ್, ರಮೇಶ್, ಹರ್ಷಿತ, ತನ್ಮಯ ಶೆಟ್ಟಿ ಮುಂತಾದ ನೂತನ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನೂತನ ತಾರಾಬಳಗ ಹಾಗೂ ತಾಂತ್ರಿಕವರ್ಗದೊಂದಿಗೆ  ‘ಲವ್ ಅಫ಼ೇರ್’ ನಿರ್ಮಾಣವಾಗುತ್ತಿದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed